ಜೀವಂತ ಮರಣ : ಹೀಗೊಂದು ಪಶ್ಚಾತ್ತಾಪ ಪತ್ರ


ಸೂಚನೆ : ಕಥಾನಾಯಕ ನಾನಲ್ಲ.

ಮನುಷ್ಯನಾಗಿ ಹುಟ್ಟಿದ ಗಳಿಗೆಯಿಂದ ಪ್ರಸ್ತುತ ಉಸಿರಾಡುತ್ತಿರುವ ಗಳಿಗೆಯವರೆಗೂ ಏನೇ ಸಾಧಿಸಿದ್ದರೂ ಅರೆಗಳಿಗೆ ಎಚ್ಚರ ತಪ್ಪಿ ಒಂದು ತಪ್ಪು ಮಾಡಿದರೆ ಅದು ತಪ್ಪು ತಪ್ಪೇ.

ಉದಾಹರಣೆಗೆ, ಒಬ್ಬ ದಾಂಡಿಗನಾಗಿ ಒಬ್ಬರಿಗೆ ಕ್ರಿಕೆಟ್ ಆಟದಲ್ಲಿ ಹತ್ತಾರು ವರ್ಷಗಳ ಅನುಭವವಿರ ಬಹುದು. ಅವರು ಅನೇಕ ದಾಖಲೆಗಳನ್ನ ಮಾಡಿರ ಬಹುದು. ಅನೇಕ ಬಾರಿ ತಮ್ಮ ತಂಡಕ್ಕೆ ಏಕಾಂಗಿಯಾಗಿ ಜಯ ತಂದು ಕೊಟ್ಟಿರಬಹುದು. ಒಂದೇ ಓವರಿನ ಆರೂ ಬಾಲ್ ಗಳನ್ನೂ ಸಿಕ್ಸರ್ ಬಾರಿಸಿರ ಬಹುದು. ಅಷ್ಟೇ ಏಕೇ? ಎದುರಾಳಿಯ ಬೌಲರ್ ಗಳ ಕನಸಿನಲ್ಲೂ ಬಂದು ಇವರು ಕಾಡಿಸಿರ ಬಹುದು. ಸಚಿನ್ ತೆಂಡೂಲ್ಕರ್ ಆಗಿರ ಬಹುದು, ಲಾರಾ ಆಗಿರ ಬಹುದು, ವೀರೆಂದ್ರ ಸೆಹ್ವಾಗ್ ಇರಬಹುದು, ಸನತ್ ಜಯಸೂರ್ಯ ಆಗಿರಬಹುದು. ಅಥ್ವ ಇನ್ನು ಯಾರೆಂದರೆ ಯಾರೇ ಆಗಿರಬಹುದು.

ಅವರು ಈಗ ಪ್ರಸ್ತುತ ಆಡುತ್ತಿರುವ ಪಂದ್ಯದಲ್ಲಿ ಕೇವಲ ೪೫ ಬಾಲ್ ಗಳನ್ನು ಎದುರಿಸಿ ೯೯ ರನ್ಗಳನ್ನ ಕಲೆಹಾಕಿರ ಬಹುದು.
೪೬ ನೇ ಬಾಲನ್ನು ಎದುರಿಸುವಾಗ............ಎದುರಿಸುವಾಗ?............ಸ್ವಲ್ಪ ಎಚ್ಚರ ತಪ್ಪಿ ತನ್ನ ವಿಕೆಟ್ ಒಪ್ಪಿಸಿದರೆ?
ಒಪ್ಪಿಸಿದರೆ...?
ಆಗ ಯಾವ ಅಂಪೈರ್ ತಾನೇ ಆ ದಾಂಡಿಗನ ಹಿಂದಿನ ದಾಖಲೆ ಗಮನಿಸಿ ತನ್ನ ತೀರ್ಪನ್ನ ಬದಲಿಸಲು ಸಾದ್ಯ?
.
.
ಈ ಒಂದು ತಪ್ಪಿನಿಂದ ತನ್ನ ತಂಡ ಆ ಪಂದ್ಯವನ್ನೇ ಸೋತು ಬಿಟ್ಟರೇ?
.
.
ಹಾಗೂ ಈ ಪಂದ್ಯ ವಿಶ್ವ ಕಪ್ಪಿನ ಅಂತಿಮ ಪಂದ್ಯವಾಗಿ ಬಿಟ್ಟಿದ್ದರೇ?
.
.
.
?
ತನ್ನಿಂದಾನೆ ಒಂದು ತಂಡ ಸದರೀ ಕ್ರೀಡೆಯ ಅತ್ಯುತ್ತಮ ಪ್ರಶಸ್ತಿಯನ್ನೇ ಕಳೆದು ಕೊಂಡರೆ ?
.
.
ಕೋಟ್ಯಾನುಕೋಟಿ ಕ್ರಿಕೆಟ್ ಪ್ರೇಮಿಗಳ ನಿರಾಸೆಗೆ ನಾನೇ ಕಾರಣನಾಗ ಬಹುದಲ್ಲವೇ ? 

ಆ ೪೬ ನೇ ಬಾಲ್ ನಾನು ಸೂಕ್ತವಾಗಿ ಎದುರಿಸುವಲ್ಲಿ  ದುಡುಕಿದಾಗ ನನಗೆ ನನ್ನ ತಪ್ಪಿನ ಅರಿವಾಗಿರಲೇ ಇಲ್ಲ. ಆದರೇ ಒಂದು ನಿಶ್ಚಿತ ಪ್ರಶಸ್ತಿ ಕೈ ತಪ್ಪಿ ಹೋದ ಮೇಲೆ ಪಶ್ಚಾತ್ತಾಪ ಪಡಬೇಕೆನಿಸುತ್ತಿದೆ.

ಆ ೪೬ ನೇ ಬಾಲ್ ನನಗೆ ಇನ್ನೊಮ್ಮೆ ಎದುರಿಸಲು ಅವಕಾಶ ಸಿಕ್ಕರೇ...?
-----------------------------------------------------------------------------------
ನಮ್ಮೆಲರ ಜೀವನದಲ್ಲಿ ಜರುಗುವ ಅನೇಕ ಘಟನೆಗಳಲ್ಲೂ ಒಮ್ಮೊಮ್ಮೆ, ಒಂದು ಗಳಿಗೆಯ ನಮ್ಮ ದುಡುಕುತನದಿಂದ ಅನೇಕರಿಗೆ ನಿರಾಶೆ, ನೋವು, ಸಂಕಟ, ಅಪಮಾನಕ್ಕೆ ಪರೋಕ್ಷವಾಗಿ ನಾವು ಕಾರಣವಾಗುವ ಘಟನೆ ನಡೆದು ಹೋಗಿ ಬಿಡುತ್ತವೆ.

ಒಬ್ಬ ವ್ಯಕ್ತಿ ತನ್ನ ಆಯುಷ್ಯದಲ್ಲಿ ಇಲ್ಲಿಯವರೆಗೆ ಅದೆಷ್ಟೋ ಸಾಧನೆಗಳನ್ನೇ ಮಾಡಿದ್ದರೂ, ಪ್ರಸ್ತುತ ಒಂದು ಗಳಿಗೆಯಲ್ಲಿ ತಪ್ಪೆಸಗಿದರೇ? ಅದನ್ನ ತಪ್ಪಲ್ಲ ಎಂದು ಸ್ವೀಕರಿಸಲು ಸಾದ್ಯವೇ? ಅಥ್ವ ಅದರಿಂದ ಆಗುವ ಪರಿಣಾಮವನ್ನ ಬದಲಿಸಲು ನಮ್ಮಿಂದ ಸಾದ್ಯವೇ?

ಜೀವನದಲ್ಲಿ ಮನುಷ್ಯನ ಸಾಧನೆಗಳು ಕೇವಲ ತನ್ನ ವ್ಯಗ್ತಿಗತ ಸಾಧನೆಗಳಾಗಿರಲು ಸಾಧ್ಯವೇ ಇಲ್ಲ. ಪ್ರತ್ಯಕ್ಷವಾಗಿ ಇಲ್ಲ ಪರೋಕ್ಷವಾಗಿ, ಕೊನೆಗೆ ಯಾವುದಿಲ್ಲವೆಂದರೆ, ಸಾಧನೆಯನ್ನ "ಸಾಧನೆ" ಎಂದು ಗುರುತಿಸಲಾದರೂ ಮತ್ತೊಬ್ಬ ವ್ಯಕ್ತಿಯ ಅವಶ್ಯಕತೆ ಇರುತ್ತೆ.

ಹೆಚ್ಚೆಚ್ಚು ಸಾಧಿಸಿದಷ್ಟೂ ಇನ್ನೂ ಹೆಚ್ಚೆಚ್ಚು ಜವಾಬ್ದಾರಿಗಳು ನಮ್ಮ ಹೆಗಲೇರುತ್ತವೆ, ಜವಾಬ್ದಾರಿಗಳು ಜಾಸ್ತಿ ಆದಷ್ಟು ನಮ್ಮನ್ನ ಗುರುತಿಸುವವರು ಹೆಚ್ಚಾಗುತ್ತಾರೆ. ನಮ್ಮನ್ನ ಗುರುತಿಸುವ ಜನ ಕೇವಲ ನಾವು ವ್ಯಕ್ತ ಪಡಿಸುವ ಒಳ್ಳೇ ಗುಣಗಳನ್ನೇ ಗುರುತಿಸ ಬೇಕೆಂದೇನಿಲ್ಲ. ನಮ್ಮ ತಪ್ಪುಗಳನ್ನೂ ಸಹ ಗುರುತಿಸ ಬಹುದು. 

ತಪ್ಪು ಮಾಡದೇ ಇರಲು ಅಸಾದ್ಯ. ಆದರೆ ನಮ್ಮಿಂದ ತಪ್ಪು ಜರುಗಿದ ನಂತರ ಅದನ್ನ ಸ್ವೀಕರಿಸಿ ಒಪ್ಪಿಕೊಳ್ಳುವುದಕ್ಕೂ ಯೋಗ್ಯ ವ್ಯಕ್ತಿತ್ವ ಇರ್ಬೇಕು. ಅದಕ್ಕೆ ಸೂಕ್ತವಾದ, ಪಕ್ವವಾದ ಸಮಯ, ಸಂದರ್ಭ, ಸನ್ನಿವೇಶ ಕೂಡಿ ಬರ್ಬೇಕು. ಒಮ್ಮೆ ಮಾಡಿದ ತಪ್ಪನ್ನೇ ಮತ್ತೆ ಮರುಕಳಿಸದೇ ಇರಲು ಜವಾಬ್ದಾರಿ, ಜ್ಞಾನ, ತಾಳ್ಮೆ, ಸಮಯ ಪ್ರಜ್ಞೆ, ಧೈರ್ಯ ಇರ್ಬೇಕು.

-----------------------------------------------------------------------------

ನಡೆದು ಹೋದ ತಪ್ಪಿನ ಅರಿವು ಒಮ್ಮೊಮ್ಮೆ ಕೂಡಲೇ ಆಗ ಬಹುದು ಮತ್ತೆ ಕೆಲ್ವೊಮ್ಮೆ ತುಂಬಾ ತಡವಾಗಬಹುದು. ತಕ್ಷಣವೋ ಅಥ್ವ ತಡವೋ, ಒಟ್ಟಲ್ಲಿ ತಪ್ಪಿನ ಅರಿವಾದ ನಂತರವೂ ಅದೆಷ್ಟೋ ಬಾರಿ ಸರಿಪಡಿಸಲಾಗದಷ್ಟು ಕೈಮೀರಿ ಘಟನೆಗಳು ಜರುಗಿ ಹೋಗಿ ಬಿಟ್ಟಿರುತ್ತವೆ. ಆಗ ಪಶ್ಚಾತ್ತಾಪ ಒಂದೇ ನಮಗುಳಿಯುವ ಆಯ್ಕೆ.

ಹೌದು ಅಂತಹ ಒಂದು ಕಹಿ ಘಟನೆ ನನ್ನೆದುರಿಗೇ ನಡೆದು ಹೋಗಿದೆ. ಕರುಳನ್ನೇ ಕತ್ತರಿಸಿದಷ್ಟು ದುಃಖ ನೀಡುತ್ತಿದೆ. ಪಶ್ಚಾತ್ತಾಪ ಒಂದೇ ಮುಂದಿರುವ ಸದ್ಯದ ನನ್ನ ಆಯ್ಕೆ. ಏಕೆಂದರೆ ಇನ್ನು ಉಳಿದ ನನ್ನ ಆಯುಷ್ಯವನ್ನೆಲ್ಲಾ ಮುಡುಪಿಟ್ಟರೂ ನಡೆದು ಹೋಗಿರುವ ತಪ್ಪನ್ನ ಮತ್ತೆ ಸರಿ ಪಡಿಸಲು ಸಾದ್ಯವಿಲ್ಲ. 

ಈ ಸತ್ಯವನ್ನ ಅರಿತು ಕೊಂಡಿದ್ದೇನೆ ಹಾಗೂ ಅದರ ಹೊಣೆಯನ್ನೂ ಒಪ್ಪಿಕೊಳ್ಳುತ್ತಿದ್ದೇನೆ. ನನ್ನಿಂದ ಆದ ತಪ್ಪನ್ನ ನನ್ನ ಸುತ್ತಮುತ್ತಲಿನ ನಾಲ್ಕಾರು ಜನ ಗುರುತಿಸಿ ಮತ್ತೆ ಇದನ್ನೇ ಮರುಕಳಿಸದಿರಲೆಂದು ಆಶಿಸುತ್ತೇನೆ.

ಪೋಷಕನಾಗಿ ನನ್ನ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನೆರವೇರಿಸುವಲ್ಲಿ ಸಂಪೂರ್ಣವಾಗಿ ಸೋತಿರುವ ನಿದರ್ಶನ ಇಂದು ನನ್ನ ಮುಂದೆ ಎದುರಾಗಿದೆ. ಪರೋಕ್ಷವಾಗಿ ಈ ಘಟನೆಗೆ ನಾನೇ ಜವಾಬ್ದಾರನಾಗಿರುವುದರಿಂದ ನನ್ನ ತಪ್ಪನ್ನು ಸ್ವೀಕರಿಸುತ್ತಿದ್ದೇನೆ.

ನನ್ನಿಂದಾದ ತಪ್ಪಿಗೆ ಇಂದು ನನ್ನನ್ನೇ ನಂಬಿದ್ದವರಿಗೆ, ಗೌರವಿಸುತ್ತಿದ್ದವರಿಗೆ, ಪ್ರೀತಿಸುತ್ತಿದ್ದವರಿಗೆ ಹಾಗೂ ನನ್ನ ಇನ್ನೂ ಅನೇಕ ಹಿತೈಷಿಗಳಿಗೆ ಅಪಾರ ನೋವುಂಟು ಮಾಡಿದ್ದಕ್ಕೆ ಹಾಗೂ ಅನ್ಯರೆದುರು ತಲೆ ತಗ್ಗಿಸುವಂತೆ ಮಾಡಿದುದಕ್ಕೆ ನಾನು ಪಶ್ಚಾತ್ತಾಪ ಪಡುತ್ತಿದ್ದೇನೆ.

ಇಂದು ನಾನು ಜೀವಂತವಿದ್ದೂ ಉಸಿರೇ ನಿಂತು ಹೋಗಿರುವ ಅನುಭವವನ್ನ ಎದುರಿಸುತ್ತಿದ್ದೇನೆ...
ನಿಮ್ಮಿಂದ ನನ್ನನ್ನು ಕ್ಷಮಿಸಲು ಸಾದ್ಯವಾದರೆ ಕ್ಷಮಿಸುವಿರಾ ?

---------------------------------------------------------------------------

ಸೂಚನೆ : ಕಥಾನಾಯಕ ನಾನಲ್ಲ. ಆದರೆ ಇದು ಒಂದು ಕಟ್ಟು ಕಥೆಯಲ್ಲ.

0 comments:

Post a Comment