ಶ್ರೀಕೃಷ್ಣನಿಗೆ ಚಕ್ರವಿದ್ದಂತೆ,
ಅರ್ಜುನನಿಗೆ ಗಾಂಢೀವವಿದ್ದಂತೆ
ಕರ್ಣನಿಗೆ ವಿಜಯ ಧನಸ್ಸಿದ್ದಂತೆ
ಶರವೇಗದಲ್ಲಿ ಮುನ್ನುಗ್ಗುತ್ತಿರುವ ಐಟಿಲೋಕದಲ್ಲಿ
ಸಾಫ್ಟೇರ್‌ಎಂಬ ಈ ಕುರುಕ್ಷೇತ್ರ ಯುದ್ದದಲ್ಲಿ,
ನನಗೆ ಆಯುಧವಾಗಿರುವ
ಹೆಮ್ಮೆಯ ಓ ನನ್ನ ಲ್ಯಾಫ್‌ಟಾಪೇ,
ಅರ್ಜುನನ ಅಕ್ಷಯತೂಣಿರದಂತೆ,
ನಿನ್ನ ಬ್ಯಾಟರೀ ಸದಾ ಭರ್ತಿಯಾಗಿರಲಿ,
ಶ್ರೀಕೃಷ್ಣನ ಸಾರಥ್ಯವಿದ್ದಂತೆ,
ಇಂಟರ್ನೆಟ್ ಸದಾ ಜೊತೆಯಿರಲಿ.
ಕರ್ಣನಿಗೆ ಕವಚಕುಂಡಲಗಳ ರಕ್ಷಣೆ ಇದ್ದಂತೆ
ವೈರಸ್, ಮಾಲ್‌ವೇರ್, ಸ್ಪೈವೇರ್ಗಳಿಂದ
ನಿನಗೆ ೨೪/೭ ರಕ್ಷಣೆ ಇರಲಿ
ಅಶ್ವತ್ತಾಮನ ಹಣೆಯ ಮಣಿಯಂತೆ
ಅತ್ಯಾಧುನಿಕ ಸಾಫ್ಟೇರ್‌ಗಳು ಹಾಗೂ ಅವುಗಳ ಲೈಸೆನ್ಸ್ಗಳು
ಸದಾ ತುದಿಬೆರಳಿನಲ್ಲಿರಲಿ.
ನಲ್ಮೆಯ ನನ್ನ ಎಲ್ಲಾ ಸನ್ ಮಿತ್ರರಿಗೂ
ಟೀಕಿಸುವ, ನಿಂದಿಸುವ ಹಾಗೂ ಶಪಿಸುವ
ಸಮ್ ಅದರ್ ಮಿತ್ರರಿಗೂ
ಸರ್ವರಿಗೂ
ಆಯುಧ ಪೂಜೆ ಹಾಗೂ
ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
/
ಲೋದ್ಯಾಶಿ
Read More!
Showing posts with label ವಿಜಯದಶಮಿ. Show all posts
Showing posts with label ವಿಜಯದಶಮಿ. Show all posts